ಸೌಲಭ್ಯಗಳು
ಶಾಲೆ
ಸುತ್ತೂರಿನ ಜೆಎಸ್‌ಎಸ್ ಶಾಲೆಯು 65 ಎಕರೆ ಪ್ರದೇಶದಲ್ಲಿ ಸುಂದರ ಸಸ್ಯ ಶಾಮಲ ಆವರಣದಲ್ಲಿ, ಕಲಿಕೆಗೆ ಸೂಕ್ತವಾದ ಪರಿಸರದ ನಡುವೆ ಸ್ಥಾಪಿತವಾಗಿದೆ. ನೈಸರ್ಗಿಕ ಪರಿಸರ ಹಾಗೂ ಆಧುನಿಕ ಸೌಲಭ್ಯಗಳ ಅತ್ಯುತ್ತಮ ಸಂಗಮ ಇಲ್ಲಿದೆ. ನಮ್ಮ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳಿವೆ. ಉಚಿತ ಶಿಕ್ಷಣ, ಊಟ, ವಸತಿ, ಪುಸ್ತಕಗಳು, ವೈದ್ಯಕೀಯ ಸೇವೆ ಹಾಗೂ ಕಡಿಮೆ ಮೊತ್ತದಲ್ಲಿ ಸಮವಸ್ತçಗಳನ್ನು ನೀಡಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳ ಜೀವನ ಕೇವಲ ತರಗತಿಯ ಕಲಿಕೆಗೆ ಸೀಮಿತವಾಗದೆ ಸಂಗೀತ, ನೃತ್ಯ, ಚಿತ್ರಕಲೆ, ಕರಕುಶಲವಸ್ತುಗಳ ತಯಾರಿಕೆ, ಕೃಷಿ, ಯೋಗ, ಸಮರ ಕಲೆ (ಮಾರ್ಷಿಯಲ್ ಆರ್ಟ್ಸ್), ಮಲ್ಲಕಂಬ, ವೀರಗಾಸೆಯಂತಹ ವಿವಿಧ ಪಠ್ಯೇತರ ಚಟುವಟಿಕೆಗಳನ್ನೂ ಒಳಗೊಂಡಿರುತ್ತದೆ. ಸಮರ್ಥ ಅನುಭವಿ ಬೋಧನಾ ಸಿಬ್ಬಂದಿ ವರ್ಗ ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಲು ನೀಡುವುದರ ಜೊತೆಗೆ ಅದರ ಪೋಷಣೆಗೂ ಅವಕಾಶ ನೀಡುತ್ತದೆ. ಶಾಲೆಯ ಮೂಲಭೂತ ಸೌಕರ್ಯಗಳು ಹೀಗಿವೆ:
ಸಮಾಲೋಚನೆ ಮತ್ತು ಸಲಹಾ ಕೇಂದ್ರ
ಸುಸಜ್ಜಿತ ಕಟ್ಟಡ
ಆಧುನಿಕ ಕಂಪ್ಯೂಟರ್ ಲ್ಯಾಬ್
ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಮತ್ತು ಸಂಪನ್ಮೂಲ ಘಟಕಗಳು
ವೈದ್ಯಕೀಯ ಶುಶ್ರೂಷೆ
ವಿದ್ಯಾರ್ಥಿ ಜೀವನದಲ್ಲಿ ಮಾರ್ಗದರ್ಶನ ಮತ್ತು ಸಮಾಲೋಚನೆ ಬಹಳ ಮುಖ್ಯ. ಶೈಕ್ಷಣಿಕವಾಗಿ ಮತ್ತು ಜೀವನದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇದರಿಂದ ಸಹಾಯ ದೊರೆಯುತ್ತದೆ. ಸೂಕ್ತ ಸಮಾಲೋಚನೆಯು ಉತ್ತಮ ಆಲೋಚನೆಗಳನ್ನು ಮತ್ತು ಜೀವನದ ಅಮೂಲ್ಯ ಪಾಠಗಳನ್ನು ಕಲಿಸಿಕೊಡುತ್ತಿವೆ. ಮಾನಸಿಕ ತುಮುಲ ಅರ್ಥಮಾಡಿಕೊಳ್ಳಲು ಮತ್ತು ನಿಭಾಯಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಸಲಹಾ ಕೇಂದ್ರದ ಪ್ರಾಥಮಿಕ ಉದ್ದೇಶವೇನೆಂದರೆ: