Suttur Srikshethra

  • Home
  • Suttur Srikshetra
about

ಸುತ್ತೂರು ಶ್ರೀಕ್ಷೇತ್ರ

ಸುತ್ತೂರು ಶ್ರೀಕ್ಷೇತ್ರವು ದಕ್ಷಿಣ ಭಾರತದ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಇದು ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಕಪಿಲಾ ನದಿಯ ದಡದಲ್ಲಿದೆ. ಈ ಕ್ಷೇತ್ರಕ್ಕೆ ಸಾವಿರ ವರ್ಷಗಳ ಇತಿಹಾಸವಿದೆ. ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿಗಳು ಸುತ್ತೂರಿನಲ್ಲಿ ಸ್ಥಾಪಿಸಿದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠವು ಸಹಸ್ರಾರು ವರ್ಷಗಳ ಸುದೀರ್ಘ ಪರಂಪರೆಯನ್ನು ಹೊಂದಿದೆ. ಶ್ರೀಮಠವು ಸಮಾಜದ ಉನ್ನತಿಗೆ ಮಹತ್ತರ ಕೊಡುಗೆ ನೀಡಿದೆ.

ಯುಗಯುಗಗಳಿಂದಲೂ ಭಾರತೀಯರು ಧಾರ್ಮಿಕ ಮತ್ತು ಆಧ್ಯಾತ್ಮಿಕ ಕೇಂದ್ರಗಳೊAದಿಗೆ ನಿಕಟವಾದ ಸಂಪರ್ಕವನ್ನು ಹೊಂದಿದ್ದಾರೆ. ಋಷಿಗಳು ಅಥವಾ ಆಧ್ಯಾತ್ಮಿಕ ಗುರುಗಳು ಸಾಮಾನ್ಯ ಜನರಲ್ಲಿ ನೈತಿಕ ಮೌಲ್ಯಗಳನ್ನು ಬೆಳಗಿಸುವ ಕೆಲಸದಲ್ಲಿ ತೊಡಗಿದ್ದಾರೆ. ಸುಮಾರು 1,000 ವರ್ಷಗಳಿಂದ ಸುತ್ತೂರಿನ ಗುರುಪರಂಪರೆಯು ಶ್ರೀಮಠವನ್ನು ಮುನ್ನಡೆಸಿ ಸಮಾಜದ ಉನ್ನತಿಗೆ ತಮ್ಮದೇ ಆದ ರೀತಿಯ ಕೊಡುಗೆ ನೀಡಿದೆ.

ದೈವಿಕ
100%
1000 + ವರ್ಷ ಹಳೆಯದು
100%

ಶ್ರೀ ಸುತ್ತೂರು ಮಠದ ಸ್ಥಾಪನೆಯನ್ನು ಒಂದು ವಿಶಿಷ್ಟ ಐತಿಹಾಸಿಕ ಘಟನೆ ಎಂದು ಬಣ್ಣಿಸಬಹುದು. ಶಾಸನಗಳ ಪ್ರಕಾರ, ಶ್ರೀಮಠವು ಚೋಳ ರಾಜವಂಶದ ಆಳ್ವಿಕೆಯ ಅವಧಿಯಲ್ಲಿ ಸ್ಥಾಪನೆಯಾಯಿತು. ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು, ಚೋಳ ಸಾಮ್ರಾಜ್ಯದ ರಾಜರಾಜ ಚೋಳ ಮತ್ತು ಗಂಗ ಸಾಮ್ರಾಜ್ಯದ ರಾಜ ರಾಚಮಲ್ಲನ ನಡುವೆ ನಡೆಯಲಿದ್ದ ಯುದ್ಧವನ್ನು ತಡೆಯುವಲ್ಲಿ ಯಶಸ್ವಿಯಾದರು. ಎರಡೂ ಸಾಮ್ರಾಜ್ಯಗಳ ರಾಜರಿಗೆ ಯುದ್ಧದ ಭೀಕರತೆಯ ಕುರಿತು ಅರಿವು ಮೂಡಿಸಿ ಅವರ ಹಗೆತನವನ್ನು ಕೊನೆಗೊಳಿಸಿದರು. ಈ ಘಟನೆಯ ನಂತರ, ರಾಜರಾಜ ಚೋಳನ ಕೋರಿಕೆಯ ಮೇರೆಗೆ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳು ಶ್ರೀಮಠವನ್ನು ಸ್ಥಾಪಿಸಿ ಈ ಪ್ರದೇಶದಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ತಂದರು.

ಶ್ರೀಮಠದ ಪರಂಪರೆಯಲ್ಲಿ ಬಂದ ಎಲ್ಲ ಪೀಠಾಧಿಪತಿಗಳೂ ಆಧ್ಯಾತ್ಮಿಕ ಮೌಲ್ಯಗಳು ಮತ್ತು ಆದರ್ಶಗಳನ್ನು ಎತ್ತಿಹಿಡಿದು ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಗಾಗಿ ಕೆಲಸ ಮಾಡಿದರು. ಶ್ರೀಮಠದ 23ನೇ ಪೀಠಾಧಿಪತಿಗಳಾದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಯವರು ಜೆಎಸ್‌ಎಸ್ ಮಹಾವಿದ್ಯಾಪೀಠವನ್ನು ಸ್ಥಾಪಿಸುವ ಮೂಲಕ, ಶ್ರೀಮಠವು ತನ್ನ ಕಾರ್ಯಗಳನ್ನು ಅನೇಕ ಕ್ಷೇತ್ರಗಳಲ್ಲಿ ವಿಸ್ತರಿಸಿತು. ಸದಾ ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿರುವ ಶ್ರೀಮಠದ ಕಾರ್ಯಕ್ರಮಗಳಲ್ಲಿ ಈ ಕೆಳಗಿನವು ಸೇರಿವೆ.

· ನಿರಾಶ್ರಿತರಿಗೆ ಅನಾಥಾಶ್ರಮಗಳು

· ನಿರ್ಗತಿಕ ಮಕ್ಕಳ ಕುಟೀರ

· ಮೂಲಸೌಕರ್ಯಗಳಿಂದ ವಂಚಿತರಾದ ಮಕ್ಕಳಿಗೆ ವಸತಿನಿಲಯಗಳು

· ಜ್ಞಾನದ ವಿವಿಧ ಶಾಖೆಗಳಲ್ಲಿ ಶಿಕ್ಷಣ

·  ಗ್ರಾಮೀಣಾಭಿವೃದ್ಧಿ

· ಆರೋಗ್ಯ ರಕ್ಷಣೆ

· ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯ ಪೋಷಣೆ

· ಕೃಷಿ ಕ್ಷೇತ್ರಕ್ಕೆ ಸಹಾಯ

· ಸಂಪ್ರದಾಯ, ಸಾಹಿತ್ಯ ಮತ್ತು ಲಲಿತಕಲೆಗಳ ಕುರಿತು ಅರಿವು ಹರಡುವುದು

·ಶಾಸ್ತಿçÃಯ ಸಂಗೀತಕ್ಕೆ ಪ್ರೋತ್ಸಾಹ

· ಧಾರ್ಮಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳ ವೃದ್ಧಿ

· ಸಮಾಜಸೇವೆ

·ಭಾರತೀಯ ಪರಂಪರೆ ಮತ್ತು ಮೌಲ್ಯಗಳ ಪೋಷಣೆ

· ಧಾರ್ಮಿಕ ಮತ್ತು ಆಧ್ಯಾತ್ಮಿಕ ಸಾಧಕರ ಶಾಲಾ ಶಿಕ್ಷಣ

ಸುತ್ತೂರು ಗಣಿತ ವೆಬ್‌ಸೈಟ್‌ಗೆ ಭೇಟಿ ನೀಡಿ

ಇಲ್ಲಿ ಕ್ಲಿಕ್ ಮಾಡಿ

At vero eos et accusamus et iusto odio digni goikussimos ducimus qui to bonfo blanditiis praese. Ntium voluum deleniti atque.

Melbourne, Australia
(Sat - Thursday)
(10am - 05 pm)

No products in the cart.

Subscribe to our newsletter

Sign up to receive latest news, updates, promotions, and special offers delivered directly to your inbox.
No, thanks
X