Facilities

ಸೌಲಭ್ಯಗಳು
ಶಾಲೆ

ಸುತ್ತೂರಿನ ಜೆಎಸ್‌ಎಸ್ ಶಾಲೆಯು 65 ಎಕರೆ ಪ್ರದೇಶದಲ್ಲಿ ಸುಂದರ ಸಸ್ಯ ಶಾಮಲ ಆವರಣದಲ್ಲಿ, ಕಲಿಕೆಗೆ ಸೂಕ್ತವಾದ ಪರಿಸರದ ನಡುವೆ ಸ್ಥಾಪಿತವಾಗಿದೆ. ನೈಸರ್ಗಿಕ ಪರಿಸರ ಹಾಗೂ ಆಧುನಿಕ ಸೌಲಭ್ಯಗಳ ಅತ್ಯುತ್ತಮ ಸಂಗಮ ಇಲ್ಲಿದೆ. ನಮ್ಮ ಶಾಲೆಯಲ್ಲಿ ಮಕ್ಕಳ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳಿವೆ. ಉಚಿತ ಶಿಕ್ಷಣ, ಊಟ, ವಸತಿ, ಪುಸ್ತಕಗಳು, ವೈದ್ಯಕೀಯ ಸೇವೆ ಹಾಗೂ ಕಡಿಮೆ ಮೊತ್ತದಲ್ಲಿ ಸಮವಸ್ತçಗಳನ್ನು ನೀಡಲಾಗುತ್ತದೆ. ಇಲ್ಲಿನ ವಿದ್ಯಾರ್ಥಿಗಳ ಜೀವನ ಕೇವಲ ತರಗತಿಯ ಕಲಿಕೆಗೆ ಸೀಮಿತವಾಗದೆ ಸಂಗೀತ, ನೃತ್ಯ, ಚಿತ್ರಕಲೆ, ಕರಕುಶಲವಸ್ತುಗಳ ತಯಾರಿಕೆ, ಕೃಷಿ, ಯೋಗ, ಸಮರ ಕಲೆ (ಮಾರ್ಷಿಯಲ್ ಆರ್ಟ್ಸ್), ಮಲ್ಲಕಂಬ, ವೀರಗಾಸೆಯಂತಹ ವಿವಿಧ ಪಠ್ಯೇತರ ಚಟುವಟಿಕೆಗಳನ್ನೂ ಒಳಗೊಂಡಿರುತ್ತದೆ. ಸಮರ್ಥ ಅನುಭವಿ ಬೋಧನಾ ಸಿಬ್ಬಂದಿ ವರ್ಗ ಮಕ್ಕಳಿಗೆ ತಮ್ಮ ಸಾಮರ್ಥ್ಯವನ್ನು ಕಂಡುಕೊಳ್ಳಲು ನೀಡುವುದರ ಜೊತೆಗೆ ಅದರ ಪೋಷಣೆಗೂ ಅವಕಾಶ ನೀಡುತ್ತದೆ. ಶಾಲೆಯ ಮೂಲಭೂತ ಸೌಕರ್ಯಗಳು ಹೀಗಿವೆ:

ಸಮಾಲೋಚನೆ ಮತ್ತು ಸಲಹಾ ಕೇಂದ್ರ

ಸುಸಜ್ಜಿತ ಕಟ್ಟಡ

ಶಾಲೆಯು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಅಗತ್ಯವಾದ ಅತ್ಯುತ್ತಮ ಮೂಲಸೌಕರ್ಯವನ್ನು ಹೊಂದಿದೆ. ವಿಶಾಲವಾದ ಮತ್ತು ಸ್ವಚ್ಛವಾದ ತರಗತಿ ಕೊಠಡಿಗಳಿವೆ. ಹಿರಿಯ ಪ್ರಾಥಮಿಕ ವಿಭಾಗದಲ್ಲಿ 34 ಕೊಠಡಿಗಳು ಮತ್ತು ಪ್ರೌಢಶಾಲೆಯಲ್ಲಿ 30 ಕೊಠಡಿಗಳಿವೆ. ಸ್ಮಾರ್ಟ್ ಕ್ಲಾಸ್‌ರೂಮ್ ಸೌಲಭ್ಯವೂ ಇದ್ದು, ಇದರಿಂದ ವಿದ್ಯಾರ್ಥಿಗಳು ಪಠ್ಯವಿಷಯಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ಗಣಕೀಕೃತ ಗ್ರಂಥಾಲಯ

ಶಾಲೆಯಲ್ಲಿ 39,000ಕ್ಕೂ ಹೆಚ್ಚು ಪುಸ್ತಕಗಳು, ನಿಯತಕಾಲಿಕೆಗಳು, ಪತ್ರಿಕೆಗಳು ಮತ್ತು ಇ-ಲೈಬ್ರರಿ ಸೌಲಭ್ಯವನ್ನು ಹೊಂದಿರುವ ವಿಶಾಲವಾದ ಗ್ರಂಥಾಲಯವಿದೆ. ಇದರಲ್ಲಿ ಧರ್ಮ, ಸಾಹಿತ್ಯ, ಕ್ರೀಡೆ, ವಿಜ್ಞಾನ, ಕಂಪ್ಯೂಟರ್, ರಾಜಕೀಯ, ಇತಿಹಾಸ ಮತ್ತು ಭೂಗೋಳ ಸೇರಿದಂತೆ ಎಲ್ಲಾ ವಿಷಯಗಳ ಪುಸ್ತಕಗಳಿವೆ.

ಆಧುನಿಕ ಕಂಪ್ಯೂಟರ್ ಲ್ಯಾಬ್

ಶಾಲೆಯು 70 ಕಂಪ್ಯೂಟರ್‌ಗಳು ಮತ್ತು ಇಂಟರ್‌ನೆಟ್ ಸೌಲಭ್ಯವುಳ್ಳ ಸುಸಜ್ಜಿತÀ ಕಂಪ್ಯೂಟರ್ ಪ್ರಯೋಗಾಲಯವನ್ನು ಹೊಂದಿದೆ. ಮಕ್ಕಳಿಗೆ ಬೇಕಾದ ಕಂಪ್ಯೂಟರ್ ತರಬೇತಿಯನ್ನು ನೀಡಿ ಅವರಲ್ಲಿ ನವೀನ ಮತ್ತು ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ತಾಂತ್ರಿಕ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ನಿರಂತರವಾಗಿ ಕಂಪ್ಯೂಟರ್ ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದಾರೆ.

ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಮತ್ತು ಸಂಪನ್ಮೂಲ ಘಟಕಗಳು

ವಿದ್ಯಾರ್ಥಿಗಳು ತಾವು ಕಲಿತ ವೈಜ್ಞಾನಿಕ ಸಿದ್ಧಾಂತಗಳನ್ನು ಪ್ರಯೋಗಿಸುವ ಸ್ಥಳವೇ ಶಾಲೆಯ ಪ್ರಯೋಗಾಲಯ. ಶಾಲೆಯು ಭೌತಶಾಸ್ತç, ರಸಾಯನಶಾಸ್ತç ಮತ್ತು ಜೀವಶಾಸ್ತçಕ್ಕೆ ಅಗತ್ಯವಾದ ವೈಜ್ಞಾನಿಕ ಸಲಕರಣೆಗಳಿರುವ ಆಧುನಿಕ ಹಾಗೂ ಸುಸಜ್ಜಿತ ಪ್ರಯೋಗಾಲಯಗಳನ್ನು ಹೊಂದಿದೆ. ವಿದ್ಯಾರ್ಥಿಗಳು ಶಿಕ್ಷಕರ ಮೇಲ್ವಿಚಾರಣೆಯಲ್ಲಿ ಪ್ರಯೋಗಗಳನ್ನು ಮಾಡಬಹುದು. ಶಾಲೆಯು ಸಾಕಷ್ಟು ಸಂಖ್ಯೆಯ ಮಾದರಿಗಳೊಂದಿಗೆ ಸಂಪನ್ಮೂಲ ಘಟಕಗಳನ್ನು ಹೊಂದಿದೆ.

ವ್ಯಕ್ತಿತ್ವ ವಿಕಸನ ತರಗತಿಗಳು

ಈ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಈ ತರಗತಿಗಳಲ್ಲ್ಲಿ, ವಿವಿಧ ರೀತಿಯ ಮಾನಸಿಕ ಹಾಗೂ ಸಾಮೂಹಿಕ ಚಟುವಟಿಕೆಗಳನ್ನು ನಡೆಸಲಾಗುತ್ತದೆ. ಈ ತರಗತಿಗಳ ಮುಖ್ಯ ಉದ್ದೇಶ ಮಕ್ಕಳ ಸಬಲೀಕರಣ, ಅವರ ಆತ್ಮವಿಶ್ವಾಸ ವೃದ್ಧಿ ಮತ್ತು ಅವರ ಆಸಕ್ತಿಗಳಿಗೆ ಪ್ರೋತ್ಸಾಹ ನೀಡುವುದಾಗಿದೆ.

ವೈದ್ಯಕೀಯ ಶುಶ್ರೂಷೆ

ಶಾಲೆಯು ದಿನದ 24 ಗಂಟೆಯೂ ವೈದ್ಯಕೀಯ ಶುಶ್ರೂಷಾ ಸೌಲಭ್ಯಗಳನ್ನು ಒದಗಿಸುತ್ತ್ತಿದೆ. ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ, ಪೋಷಕರಿಗೆ ಮಾಹಿತಿ ನೀಡಿ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಶಾಲೆಯ ಆವರಣದಲ್ಲೇ ಆಂಬ್ಯುಲೆನ್ಸ್ ಸೇವೆ ಲಭ್ಯವಿದೆ.

ವಿದ್ಯಾರ್ಥಿ ಜೀವನದಲ್ಲಿ ಮಾರ್ಗದರ್ಶನ ಮತ್ತು ಸಮಾಲೋಚನೆ ಬಹಳ ಮುಖ್ಯ. ಶೈಕ್ಷಣಿಕವಾಗಿ ಮತ್ತು ಜೀವನದಲ್ಲಿ ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಇದರಿಂದ ಸಹಾಯ ದೊರೆಯುತ್ತದೆ. ಸೂಕ್ತ ಸಮಾಲೋಚನೆಯು ಉತ್ತಮ ಆಲೋಚನೆಗಳನ್ನು ಮತ್ತು ಜೀವನದ ಅಮೂಲ್ಯ ಪಾಠಗಳನ್ನು ಕಲಿಸಿಕೊಡುತ್ತಿವೆ. ಮಾನಸಿಕ ತುಮುಲ ಅರ್ಥಮಾಡಿಕೊಳ್ಳಲು ಮತ್ತು ನಿಭಾಯಿಸಲು ಇದು ಅವರಿಗೆ ಸಹಾಯ ಮಾಡುತ್ತದೆ. ಸಲಹಾ ಕೇಂದ್ರದ ಪ್ರಾಥಮಿಕ ಉದ್ದೇಶವೇನೆಂದರೆ:

 

ವಿದ್ಯಾರ್ಥಿಗಳ ಭಾವನಾತ್ಮಕ ಸಮಸ್ಯೆಗಳನ್ನು ನಿಭಾಯಿಸುವುದು;
ಶಿಸ್ತÀÄ ತುಂಬುವ ಮೂಲಕ ವಿದ್ಯಾರ್ಥಿಯ ಸ್ವಭಾವವನ್ನು ರೂಪಿಸುವುದು;
ಸೂಕ್ತ ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಗುರಿ ಸಾಧನೆಗೆ ಮಾರ್ಗದರ್ಶನ ನೀಡುವುದು;
ಸಮಾಲೋಚನಾ ತರಗತಿಗಳ ಮೂಲಕ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ನಡುವೆ ಅಂತರವನ್ನು ಕಡಿಮೆ ಮಾಡುವುದು;
ಮಾರ್ಗದರ್ಶನ ಮತ್ತು ಸಮಾಲೋಚನಾ ಕಾರ್ಯಕ್ರಮಗಳು ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವುದು.

At vero eos et accusamus et iusto odio digni goikussimos ducimus qui to bonfo blanditiis praese. Ntium voluum deleniti atque.

Melbourne, Australia
(Sat - Thursday)
(10am - 05 pm)

No products in the cart.

Subscribe to our newsletter

Sign up to receive latest news, updates, promotions, and special offers delivered directly to your inbox.
No, thanks
X