Beyond Learning

ಪಠ್ಯೇತರ ಚಟುವಟಿಕೆಗಳು

ಪಠ್ಯೇತರ ಚಟುವಟಿಕೆಗಳೆಂದರೆ ಶಾಲಾ ಶಿಕ್ಷಣದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ತುಂಬ ಅಗತ್ಯವಾಗದಿರುವಂತಹ ಚಟುವಟಿಕೆಗಳು ಎನ್ನಬಹುದು. ಆದರೆ ಈ ಚಟುವಟಿಕೆಗಳು ಭವಿಷ್ಯದಲ್ಲಿ, ಅಂದರೆ ಕಾಲೇಜು ಶಿಕ್ಷಣಕ್ಕೆ ಸೇರುವ ಸಮಯದಲ್ಲಿ ತುಂಬ ಮುಖ್ಯವಾಗುತ್ತದೆ. ಏಕೆಂದರೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳು ಪ್ರತಿಭೆ, ಆಸಕ್ತಿ ಹಾಗೂ ಚಿಂತನೆಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ನೆರವಾಗುತ್ತವೆ. ಜೊತೆಗೆ ಇದು ಶಿಸ್ತು, ಸಮಯ ಪರಿಪಾಲನೆ ಮುಂತಾದ ಪ್ರಾಯೋಗಿಕ ಕೌಶಲ್ಯಗಳನ್ನೂ ಕಲಿಸುತ್ತದೆ.

ಪಠ್ಯೇತರ ಚಟುವಟಿಕೆಗಳ ಕ್ಷೇತ್ರ ಬಹಳ ವಿಸ್ತಾರವಾದುದು. ಎಲ್ಲಾ ವಿದ್ಯಾರ್ಥಿಗಳೂ ತಮಗೆ ಆಸಕ್ತಿ ಇರುವಂತಹ ಪಠ್ಯೇತರ ಚಟುವಟಿಕೆಯನ್ನು ಆಯ್ಕೆ ಮಾಡಿಕೊಳ್ಳಬಹುದು

ಶಾಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಸಂಗೀತ ಅಭ್ಯಾಸ, ನೃತ್ಯ, ಕಲೆ, ಚಿತ್ರಕಲೆ, ಕರಕುಶಲ ವಸ್ತುಗಳ ತಯಾರಿಕೆ, ಕೃಷಿ, ಯೋಗ, ಮಲ್ಲಕಂಬ ಮತ್ತು ವೀರಗಾಸೆಗಳನ್ನು ಕಲಿಸಲಾಗುತ್ತದೆ. ಜೊತೆಗೆ ಶಾಲೆಯು ಒಳಾಂಗಣ ಮತ್ತು ಹೊರಾಂಗಣ ಕ್ರೀಡಾ ಸೌಲಭ್ಯಗಳನ್ನು ಹೊಂದಿದ್ದು, ವಿದ್ಯಾರ್ಥಿಗಳಿಗೆ ವಾಲಿಬಾಲ್, ಥ್ರೋಬಾಲ್, ಖೊ-ಖೊ, ಕ್ರಿಕೆಟ್ ಸೇರಿದಂತೆ ವಿವಿಧ ಬಗೆಯ ಕ್ರೀಡೆಗಳಲ್ಲಿ ತರಬೇತಿ ನೀಡಲಾಗುತ್ತದೆ. ಆಸಕ್ತ ವಿದ್ಯಾರ್ಥಿಗಳನ್ನು ಅಂತರ-ಶಾಲಾ ಸ್ಪರ್ಧೆಗಳು, ಪ್ರತಿಭಾ ಕಾರಂಜಿ ಸ್ಪರ್ಧೆಗಳು, ಹಾಗೂ ಪ್ರತಿ ವರ್ಷವೂ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ನಡೆಯುವ ಸ್ಪರ್ಧೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಲಾಗುತ್ತದೆ. ಕೆಲವು ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟçಮಟ್ಟದ ಕ್ರೀಡಾಸ್ಪರ್ಧೆ, ರಸಪ್ರಶ್ನೆ ಮತ್ತು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಗಳಿಸಿದ್ದಾರೆ.

Suttur School

ಕ್ರೀಡೆಗಳು ಮತ್ತು ಆಟಗಳು

ಕ್ರೀಡಾ ಚಟುವಟಿಕೆಗಳು ಮತ್ತು ಆಟಗಳು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಶಾಲೆಯಲ್ಲಿ ಅನೇಕ ಕ್ರೀಡೆಗಳನ್ನು ಕಲಿಯುವ ಅವಕಾಶಗಳಿದ್ದು, ಆಸಕ್ತಿಗೆ ತಕ್ಕಂತೆ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಶಾಲೆಯಲ್ಲಿ ದೊಡ್ಡ ಆಟದ ಮೈದಾನವಿದೆ. ವಾಲಿಬಾಲ್, ಖೊ-ಖೊ, ಕಬ್ಬಡ್ಡಿ, ಬ್ಯಾಡ್ಮಿಂಟನ್, ಥ್ರೋಬಾಲ್, ಫುಟ್‌ಬಾಲ್, ಹಾಕಿ, ಹ್ಯಾಂಡ್‌ಬಾಲ್, ಕ್ರಿಕೆಟ್, ಚೆಸ್, ಕೇರಂ, ಷಟಲ್, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್ ಹಾಗೂ ಯೋಗ ಇವುಗಳ ಕಲಿಕೆಗೆ ಬೇಕಾದಂತಹ ಎಲ್ಲಾ ಉಪಕರಣಗಳಿವೆ. ಈ ಚಟುವಟಿಕೆಗಳಲ್ಲಿ ತರಬೇತಿ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಹಲವು ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಕು. ರಾಜೇಶ್ವರಿ ಗಾಯಕ್‌ವಾಡ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯಾಗಿರುವುದು ನಮಗೆ ಹೆಮ್ಮೆಯ ಸಂಗತಿ

ಇವುಗಳ ಜೊತೆಗೆ ನಮ್ಮ ಶಾಲೆಯಲ್ಲಿ ಆಸಕ್ತ ಮಕ್ಕಳಿಗೆ ‘ಮಲ್ಲಕಂಬ’ದಲ್ಲೂ ಸಹ ತರಬೇತಿ ನೀಡಲಾಗುತ್ತದೆ.

ಮಲ್ಟಿ-ಜಿಮ್

ಶಾಲೆಯಲ್ಲಿ ವಿವಿಧ ವಯೋಮಾನದ ಮಕ್ಕಳಿಗಾಗಿ ಹಲವು ವ್ಯಾಯಾಮ ಉಪಕರಣಗಳಿವೆ. ಈ ವ್ಯಾಯಾಮ ಶಾಲೆಯು (ಮಲ್ಟಿ-ಜಿಮ್) ವಿದ್ಯಾರ್ಥಿಗಳಿಗೆ ಶಾರೀರಿಕ ದೃಢತೆಯನ್ನು ಹೊಂದಲು ನೆರವಾಗುತ್ತದೆ. ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಹವ್ಯಾಸವನ್ನು ಕಲ್ಪಿಸುವಲ್ಲಿ ನೆರವಾಗುತ್ತಿದೆ.

ಪ್ರದರ್ಶನ ಕಲೆಗಳು

ವಿದ್ಯಾರ್ಥಿಜೀವನದಲ್ಲಿ ಮಕ್ಕಳಿಗೆ ಸಂಗೀತದಲ್ಲಿ ಆಸಕ್ತಿ ಇರುತ್ತದೆ. ಅನೇಕ ಮಕ್ಕಳು ಕರ್ನಾಟಕ ಸಂಗೀತ, ಸಾಂಪ್ರದಾಯಿಕ ನೃತ್ಯ ರೂಪಕಗಳು, ಕಲೆಗಳನ್ನು ಕಲಿಯಲು ಆಸಕ್ತಿ ವಹಿಸುತ್ತಾರೆ. ಈ ಪ್ರದರ್ಶನ ಕಲೆಗಳಲ್ಲಿ ಆಸಕ್ತಿಯಿರುವ ವಿದ್ಯಾರ್ಥಿಗಳಿಗೆ ಸೂಕ್ತ ಪ್ರೋತ್ಸಾಹ ನೀಡಿ ಅವರನ್ನು ರಾಷ್ಟಿçÃಯ ಹಬ್ಬಗಳ ಭಾಗವಾಗಿ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ಏರ್ಪಡಿಸುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡಿ ಅವರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಶಾಲೆಯ ವಿದ್ಯಾರ್ಥಿಗಳು ಚರ್ಚಾಸ್ಪರ್ಧೆ, ಚಿತ್ರಕಲೆ, ಹಾಡುಗಾರಿಕೆ, ವಚನಗಾಯನ, ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಜೊತೆಗೆ, ರಾಜ್ಯಮಟ್ಟದ ಸಂಗೀತ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿಯೂ ಪಾಲ್ಗೊಂಡಿದ್ದಾರೆ.

ವೀರಗಾಸೆ

ಮೇಲಿನ ಪ್ರದರ್ಶನ ಕಲೆಗಳ ಜೊತೆಗೆ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಸಾಂಪ್ರದಾಯಿಕ ಕಲೆಯಾದ “ವೀರಗಾಸೆ”ಯಲ್ಲಿಯೂ ತರಬೇತಿ ನೀಡಲಾಗುತ್ತಿದೆ. ಇದು ಕರ್ನಾಟಕದ ಜನಪ್ರಿಯ ನೃತ್ಯವಾಗಿದ್ದು, ಹಿಂದೂ ಪುರಾಣ ಕಥೆಗಳನ್ನು ಆಧರಿಸಿದೆ. ಈ ನೃತ್ಯವನ್ನು ಮುಖ್ಯವಾಗಿ ಹಿಂದೂ ಹಬ್ಬಗಳಲ್ಲಿ, ವಿಶೇಷವಾಗಿ ಕಾರ್ತಿಕ ಹಾಗೂ ಶ್ರಾವಣ ಮಾಸಗಳಲ್ಲಿ ಪ್ರದರ್ಶಿಸಲಾಗುತ್ತದೆ.

ಎನ್‌ಸಿಸಿ

ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ಭಾರತೀಯ ಮಿಲಿಟರಿ ಕೆಡೆಟ್ ಕಾರ್ಪ್ಸ್ನ ಅಂಗವಾಗಿದ್ದು, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಬಹುದಾಗಿದೆ. ಎನ್‌ಸಿಸಿಯು ಕೆಡೆಟ್‌ಗಳಿಗೆ ಮಿಲಿಟರಿ ತರಬೇತಿಯನ್ನು ಒದಗಿಸುವ ಒಂದು ಸ್ವಯಂಪ್ರೇರಿತ ಸಂಸ್ಥೆಯಾಗಿದೆ. ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಎನ್‌ಸಿಸಿ ಭೂಸೇನೆ ಮತ್ತು ವಾಯುಸೇನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಎನ್‌ಸಿಸಿ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಶಿಸ್ತು ಹಾಗೂ ದೇಶಪ್ರೇಮವನ್ನು ಬೆಳೆಸುತ್ತದೆ.

ಸ್ಕೌಟ್ಸ್ ಮತ್ತು ಗೈಡ್ಸ್

ಸ್ಕೌಟ್ಸ್ ಮತ್ತು ಗೈಡ್ಸ್ ಯುವಜನರಿಗಾಗಿ ವಿನ್ಯಾಸಗೊಳಿಸಿರುವ ಒಂದು ಸ್ವಯಂಸೇವಾ ಶೈಕ್ಷಣಿಕ ಯೋಜನೆ. ಈ ಯೋಜನೆಯು ಸ್ಕೌಟ್ಸ್ಗಳಲ್ಲಿ ವಿಶ್ವಾಸ ಮತ್ತು ಕಾನೂನನ್ನು ಆಧರಿಸಿರುವ ಮೌಲ್ಯಾಧಾರಿತ ಶಿಸ್ತನ್ನು ಕಲಿಸುವ ಗುರಿಯನ್ನು ಹೊಂದಿದೆ. ಶಾರೀರಿಕ, ಬೌದ್ಧಿಕ, ಸಾಮಾಜಿಕ, ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಪೋಷಿಸುವುದು ಮತ್ತು ಈ ಮೂಲಕ ವಿದ್ಯಾರ್ಥಿಗಳು

ನಾಯಕರ ಜವಾಬ್ದಾರಿಯುತರನ್ನಾಗಿಸುವುದು ಈ ಯೋಜನೆಯ ಉದ್ದೇಶ. ಶಾಲೆಯಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕವಿದ್ದು, ಬಾಲಕರು ಮತ್ತು ಬಾಲಕಿಯರಿಗೆ ತರಬೇತಿ ನೀಡುತ್ತಿದೆ.

At vero eos et accusamus et iusto odio digni goikussimos ducimus qui to bonfo blanditiis praese. Ntium voluum deleniti atque.

Melbourne, Australia
(Sat - Thursday)
(10am - 05 pm)

No products in the cart.

Subscribe to our newsletter

Sign up to receive latest news, updates, promotions, and special offers delivered directly to your inbox.
No, thanks
X