Curriculum

  • Home
  • Portfolio Grid 3 Columns

ಪಠ್ಯಕ್ರಮ

ಪ್ರವೇಶ

ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಿನಲ್ಲಿ ವಿದ್ಯಾರ್ಥಿಗಳ ಪ್ರವೇಶ ಪ್ರಕ್ರಿಯೆ ನಡೆಯುತ್ತದೆ. ಆಸಕ್ತರು ನೇರವಾಗಿ ಶಾಲೆಯನ್ನು ಸಂಪರ್ಕಿಸಬಹುದು ಅಥವಾ ಸಂಸ್ಥೆಯ ವೆಬ್‍ಸೈಟ್‍ಗಳಿಂದಲೂ ವಿವರಗಳನ್ನು ಪಡೆದುಕೊಳ್ಳಬಹುದು (ತಿತಿತಿ.ರಿsssಛಿhooಟsuಣಣuಡಿ.oಡಿg/ ತಿತಿತಿ.ರಿssoಟಿಟiಟಿe.oಡಿg). 1 ರಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಪ್ರವೇಶ ಪರೀಕ್ಷೆ ಮತ್ತು ಸಂದರ್ಶನದ ನಂತರ ಅರ್ಹ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ವಾಟ್ಸ್ಯಾಪ್ ಮೂಲಕವೂ ಅರ್ಜಿ ಪಡೆಯುವ ಅವಕಾಶವಿದೆ. (ಮೊಬೈಲ್ ಸಂಖ್ಯೆ: 7411486938)

ಶಿಕ್ಷಣ

ಜೆಎಸ್‍ಎಸ್ ಪ್ರೌಢಶಾಲೆಯು, ಕನ್ನಡ ಮತ್ತು ಇಂಗ್ಲೀಷ್ ಎರಡೂ ಬೋಧನಾ ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯು ನಿಗದಿಪಡಿಸುವ ಪಠ್ಯಕ್ರಮವನ್ನು ಅನುಸರಿಸುತ್ತದೆ. ಇದು ಸಹಶಿಕ್ಷಣ ಸಂಸ್ಥೆಯಾಗಿದ್ದು 1ರಿಂದ 10ನೇ ತರಗತಿಯವರೆಗೆ ಶಿಕ್ಷಣವನ್ನು ಒದಗಿಸಲಾಗುತ್ತದೆ. ನಮ್ಮ ಶಾಲೆಯು ಸಮಗ್ರ ದೃಷ್ಟಿಕೋನದ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ.
ಪ್ರಾಥಮಿಕ ಶಾಲಾ ಹಂತ ಮಗುವಿಗೆ ಸುಭದ್ರವಾದ ಶೈಕ್ಷಣಿಕ ಅಡಿಪಾಯವನ್ನು ಒದಗಿಸುವ ಹಂತವಾಗಿರುತ್ತದೆ. ಇಲ್ಲಿ ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಕ್ರಿಯಾಶೀಲವಾಗಿ ಆಲೋಚಿಸಲು ಪ್ರೋತ್ಸಾಹಿಸಲಾಗುತ್ತದೆ. ಪರಿಣಾಮಕಾರಿ ಕಲಿಕೆಯನ್ನು ಖಾತ್ರಿಪಡಿಸಲು ಸುರಕ್ಷಿತ ಹಾಗೂ ಸಕಾರಾತ್ಮಕ ವಾತಾವರಣವನ್ನು ಒದಗಿಸುವುದರ ಜೊತೆಗೆ, ಮಕ್ಕಳ ಶಾರೀರಿಕ, ಭಾವನಾತ್ಮಕ ಮತ್ತು ಅರಿವಿನ ಕೌಶಲ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ.
ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಸಮಾಜದ ವಾಸ್ತವ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿರುತ್ತಾರೆ. ಆಗ ಕೇವಲ ಶೈಕ್ಷಣಿಕ ಕಲಿಕೆಗಷ್ಟೇ ಅಲ್ಲದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಕಡೆ ಹೆಚ್ಚು ಗಮನ ಕೇಂದ್ರೀಕರಿಸಲು ಪ್ರಯತ್ನಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ಹಾಗೂ ಸೈದ್ಧಾಂತಿಕ ಮೌಲ್ಯಗಳನ್ನು ಅಭಿವೃದ್ಧಿಪಡಿಸಿ, ಸ್ವತಃ ಅನ್ವೇಷಿಸಲು ದಾರಿ ಮಾಡಿಕೊಡುವುದು ಈ ಶಾಲೆಯ ವೈಶಿಷ್ಟವಾಗಿದೆ. ಶಾಲೆಯ ಪಠ್ಯಕ್ರಮದಲ್ಲಿ ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಅವಕಾಶವಿದ್ದು, ಇದರಿಂದ ವಿದ್ಯಾರ್ಥಿಗಳ ಸಹಜ ಕೌಶಲ್ಯಗಳು ಜಾಗೃತವಾಗುವಲ್ಲಿ ನೆರವಾಗುತ್ತದೆ.

 

ಎಸ್‌ಎಸ್‌ಎಲ್‌ಸಿ ಫಲಿತಾಂಶ

ವಾರ್ಷಿಕ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡುತ್ತಿದ್ದಾರೆ. ಬೋಧಕವರ್ಗದ ಸಮರ್ಪಿತ ಸೇವಾಮನೋಭಾವ ಉತ್ತಮ ಫಲಿತಾಂಶ ಗಳಿಸಲು ಸಹಕಾರಿಯಾಗಿದೆ. ಶಾಲೆಗೆ ಪ್ರತಿ ವರ್ಷ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸರಾಸರಿ ಶೇ. 90 ರಷ್ಟು ಫಲಿತಾಂಶ ಲಭಿಸುತ್ತಿದೆ.

ಮುಖ್ಯಾಂಶಗಳು

ಸಮಗ್ರ ಶಿಕ್ಷಣ

ಸಮಗ್ರ ಶಿಕ್ಷಣವು ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಇತರ ಅಗತ್ಯಗಳನ್ನು ಪೂರೈಸುವಂತಹ ಜ್ಞಾನವನ್ನು ನೀಡಲು ಪರಿಣಾಮಕಾರಿ ವಿಧಾನವಾಗಿದೆ. ವಿದ್ಯಾರ್ಥಿಗಳು ಮಾನಸಿಕ, ಸಾಮಾಜಿಕ, ನೈತಿಕ ಮತ್ತು ಭಾವನಾತ್ಮಕ ಬೆಳವಣಿಗೆಯನ್ನು ಹೊಂದಲು ಸಹಾಯ ಮಾಡುತ್ತದೆ. ಸುತ್ತೂರಿನ ಜೆಎಸ್‍ಎಸ್ ಶಾಲೆಯಲ್ಲಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಸೃಜನಶೀಲತೆಯಿಂದ ತೊಡಗಿಸಿಕೊಳ್ಳಲು ಬೇಕಾದಂತಹ ಸಕಾರಾತ್ಮಕ ವಾತಾವರಣವನ್ನು ರೂಪಿಸಲಾಗಿದೆ.
ಜೆಎಸ್‍ಎಸ್ ಶಾಲೆಯಲ್ಲಿ ಆಧ್ಯಾತ್ಮಿಕತೆಯ ನೆಲೆಗಟ್ಟಿನ ಮೇಲೆ ಶಿಕ್ಷಣ ವ್ಯವಸ್ಥೆ ರೂಪುಗೊಂಡಿದೆ. ಇಲ್ಲಿನ ಶಾಲಾ ಚಟುವಟಿಕೆಗಳು ಹಿಂದಿನ ಗುರುಕುಲ ಶಿಕ್ಷಣ ವ್ಯವಸ್ಥೆಯನ್ನು ನೆನಪಿಗೆ ತರುವಂತಿದೆ. ಭಾರತದ ಪ್ರಾಚೀನ ಮೌಲ್ಯಗಳು ಮತ್ತು ಸಂಸ್ಕøತಿಯ ಸಾರವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಲಾಗುತ್ತದೆ. ಸಮಗ್ರ ಯೋಜನೆಯೊಂದಿಗೆ, ಶಾಲೆಯು ವಿದ್ಯಾರ್ಥಿಗಳಿಗೆ “ಜೀವಮಾನದ ಶಿಕ್ಷಣ” ವನ್ನು ನೀಡುತ್ತಿದೆ. ವ್ಯವಸ್ಥಿತ ಜೀವನಶೈಲಿ ಮತ್ತು ಆಧ್ಯಾತ್ಮಿಕ ವಾತಾವರಣ ಇವು ಭವಿಷ್ಯದಲ್ಲಿ ಉತ್ತಮ ಜೀವನವನ್ನು ನಡೆಸಲು ಮಕ್ಕಳಿಗೆ ಸಹಾಯ ಮಾಡುತ್ತದೆ.

At vero eos et accusamus et iusto odio digni goikussimos ducimus qui to bonfo blanditiis praese. Ntium voluum deleniti atque.

Melbourne, Australia
(Sat - Thursday)
(10am - 05 pm)

No products in the cart.

Subscribe to our newsletter

Sign up to receive latest news, updates, promotions, and special offers delivered directly to your inbox.
No, thanks
X