ಪ್ರಶಂಸಾಪತ್ರಗಳು
ಜೆಎಸ್ಎಸ್ ಉಚಿತ ವಸತಿ ಶಾಲೆ, ಸುತ್ತೂರು ಹಿರಿಯ ವಿದ್ಯಾರ್ಥಿಗಳ ಮಾಹಿತಿ ವಿವರ
ಶಾಲೆಯ ಕುರಿತು ಅಭಿಪ್ರಾಯ : ಸುತ್ತೂರು ಶ್ರೀಮಠವು ನನ್ನ ಜೀವನದಲ್ಲಿ ಒಂದು ಮಾರ್ಗದರ್ಶಕ ಬೆಳಕಾಗಿದೆ. ಶ್ರೀಮಠವು ಬಡ ವಿದ್ಯಾರ್ಥಿಗಳಿಗೆ ಊಟ ಜ್ಞಾನ ಮತ್ತು ಆರೋಗ್ಯ ಸೇವೆಗಳನ್ನು ಉಚಿತವಾಗಿ ಒದಗಿಸುವ ಮಹತ್ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ರಾಷ್ಟç ನಿರ್ಮಾಣದಲ್ಲಿ ಪ್ರಮುಖ ನಿರ್ವಹಿಸುತ್ತಿದೆ. ಸುತ್ತೂರು ಶ್ರೀಮಠ ಮತ್ತು ಅದರ ಎಲ್ಲ ಕಾರ್ಯಗಳಿಗೆ ಮತ್ತು ನೆರವಿಗೆ ನಾನು ಸದಾ ಚಿರಋಣಿ.
ಲಿಂಗದೇವರು ಬಿ.ಎಸ್.,
ಇಂಗ್ಲಿಷ್ ಪ್ರಾಧ್ಯಾಪಕರು
ಇದು ಕೇವಲ ಶಾಲೆಯಲ್ಲ, ಬದಲಿಗೆ ಶಿಕ್ಷಣದ ಜೊತೆಗೆ ಸರ್ವಾಂಗೀಣ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿಯಾಗುವ ಗುರುಕುಲ ಎನ್ನಬಹುದು.
ಈ ಶಾಲೆಯ ಸಮಾಜಸೇವೆಯ ದೃಷ್ಟಿಕೋನ ಹೊಂದಿದೆ. ನಾನು ಜೆಎಸ್ಎಸ್ ವಸತಿ ಶಾಲೆಗೆ ಸದಾ ಕೃತಜ್ಞನಾಗಿರುತ್ತೇನೆ.
ಧೈರ್ಯಶೀಲ ಅಣ್ಣಾಸಾಹೇಬ ಶಿತೋಲೆ,
ಭಾರತೀಯ ಭೂಸೇನೆಯಲ್ಲಿ (ಜಮ್ಮು ಬಳಿ ನೌಶೆರಾದಲ್ಲಿ ಸೇವೆ)
ಶಾಲೆಯ ಕುರಿತು ಅಭಿಪ್ರಾಯ : ಸುತ್ತೂರಿನ ಜೆಎಸ್ಎಸ್ ಶಾಲೆ ನನಗೆ ಬೇರೆ ಪ್ರಪಂಚವನ್ನೇ ತೋರಿಸಿತು. ಇಲ್ಲಿನ ಶಿಕ್ಷಕರು ನನ್ನಲ್ಲಿರುವ ಪ್ರತಿಭೆಯನ್ನು ಗುರುತಿಸಿ ನನ್ನನ್ನು ಪ್ರೋತ್ಸಾಹಿಸಿದರು. ಇಲ್ಲಿ ನೀಡಿದಂತಹ ಪಠ್ಯೇತರ ಚಟುವಟಿಕೆಗಳು ನನಗೆ ದೊಡ್ಡ ವೇದಿಕೆಯನ್ನು ಒದಗಿಸಿತು. ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರಿಗೆ ನನ್ನ ಪ್ರಣಾಮಗಳು.
ಸತೀಶ್ ಬಿ.,
ಕನ್ನಡ ಚಲನಚಿತ್ರರಂಗದಲ್ಲಿ ತಂತ್ರಜ್ಞ
ಶಾಲೆಯ ಕುರಿತು ಅಭಿಪ್ರಾಯ : ಅತ್ಯುತ್ತಮ ಶೈಕ್ಷಣಿಕ ಶಿಸ್ತನ್ನು ಹೊಂದಿರುವ ಅದ್ಭುತ ಶಿಕ್ಷಣ ಸಂಸ್ಥೆ. ಈ ಶಾಲೆಯು ನನ್ನ ವ್ಯಕ್ತಿತ್ವವನ್ನು ರೂಪಿಸಿ, ವಿಶ್ವದ ಯಾವುದೇ ಭಾಗದಲ್ಲಾದರೂ ಜೀವಿಸುವುದನ್ನು ಕಲಿಸಿದೆ.
ಅಜಯ್ ಎ.ಆರ್.,
ಆಕ್ಸೆಂಚರ್, ಬೆಂಗಳೂರು
ಶಾಲೆಯ ಕುರಿತು ಅಭಿಪ್ರಾಯ : ಈ ಶಾಲೆ ನನಗೆ ಸೇನೆಗೆ ಸೇರಲು ಪ್ರೇರಣೆ ಒದಗಿಸಿತು. ಶಾಲೆಗೆ ಹಾಗೂ ಪರಮಪೂಜ್ಯ ಜಗದ್ಗುರುಗಳಿಗೆ ನನ್ನ ಭಕ್ತಿಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ವಿಠ್ಠಲ ಧೆನಪ್ಪ ಲಮಣಿ,
ಭಾರತೀಯ ಸೇನೆ
ಶಾಲೆಯ ಕುರಿತು ಅಭಿಪ್ರಾಯ : ಸುತ್ತೂರು ಜೆಎಸ್ಎಸ್ ಶಾಲೆ ನನಗೆ ದೊಡ್ಡ ಕನಸನ್ನು ಕಾಣಲು ಪ್ರೇರೇಪಿಸಿತು. ಇಲ್ಲಿಗೆ ಬರುವ ಗಣ್ಯರ ಭಾಷಣಗಳು ವಿದ್ಯಾರ್ಥಿಗಳಿಗೆ ದೊಡ್ಡ ಪ್ರೇರಣೆ ನೀಡುತ್ತವೆ. ಇಲ್ಲಿ ಕಲಿತಿರುವ ಸಾವಿರಾರು ವಿದ್ಯಾರ್ಥಿಗಳು ಇಂದು ತಮ್ಮ ವೃತ್ತಿಜೀವನದಲ್ಲಿ ಯಶಸ್ವಿಯಾಗಿದ್ದಾರೆ. ಶಾಲೆಯಲ್ಲಿ ಕಲಿಸಿದ ಆಂತರಿಕ ಶಕ್ತಿ, ಆತ್ಮವಿಶ್ವಾಸವೇ ಇದಕ್ಕೆ ಕಾರಣ. ಎನ್ಸಿಸಿ ಚಟುವಟಿಕೆಗಳು ನನ್ನ ಜೀವನದಲ್ಲಿ ಯಶಸ್ಸಿನ ಮೆಟ್ಟಿಲುಗಳಾದವು.
ಶಿವಕುಮಾರ್ ಎನ್.,
ಪೊಲೀಸ್ ಸಬ್ ಇನ್ಸ್ಪೆಕ್ಟರ್
ಶಾಲೆ ಕುರಿತು ಅಭಿಪ್ರಾಯ : ಸುತ್ತೂರಿನ ಜೆಎಸ್ಎಸ್ ವಸತಿ ಶಾಲೆ ಅತ್ಯುತ್ತಮ ಮೂಲಭೂತಸೌಕರ್ಯಗಳುಳ್ಳ ಉತ್ತಮ ಶಾಲೆ. ಇಲ್ಲಿ ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು ಮಹತ್ವಾಕಾಂಕ್ಷೆಯುಳ್ಳ ಬಡ ಮಕ್ಕಳಿಗೆ ಶಿಕ್ಷಣ ಒದಗಿಸಲಾಗುತ್ತಿರುವುದು ಹೆಮ್ಮೆ ಪಡುವ ಸಂಗತಿ. ಇಲ್ಲಿನ ಶಿಸ್ತು, ಶಾಲಾ ಅವರಣದಲ್ಲಿ ನಿರ್ವಹಿಸುವ ಸ್ವಚ್ಛತೆ ನನಗೆ ಬಹಳ ಹಿಡಿಸಿತು. ಇಲ್ಲಿ ನೀಡುವ ಕಂಪ್ಯೂಟರ್ ಶಿಕ್ಷಣ ಅತ್ಯುತ್ತಮವಾಗಿದೆ.
ಮಹಾದೇವಪ್ರಸಾದ್ ಎ.ಪಿ.,
ಇನ್ಫೋಸಿಸ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್
ಶಾಲೆಯ ಕುರಿತು ಅಭಿಪ್ರಾಯ : ಜೆಎಸ್ಎಸ್ ಮಹಾವಿದ್ಯಾಪೀಠವು ಸಮಾಜದ ಸರ್ವತೋಮುಖ ಏಳಿಗೆಗಾಗಿ ಶ್ರಮಿಸುತ್ತಿದೆ. ನಾನು ಸುತ್ತೂರಿನ ಶಾಲೆಯಲ್ಲಿ ಕಲಿಯಲು ಅದೃಷ್ಟ ಪಡೆದಿದ್ದೆ. ನಾನು ಇಂದು ಏನೇ ಆಗಿದ್ದರು ಅದಕ್ಕೆ ಜೆಎಸ್ಎಸ್ ಕಾರಣ.
ರುಕ್ಮಿಣಿ ಎಂ.,
ಇನ್ಫೋಸಿಸ್ನಲ್ಲಿ ಸಾಫ್ಟ್ವೇರ್ ಇಂಜಿನಿಯರ್
ಶಾಲೆ ಕುರಿತು ಅಭಿಪ್ರಾಯ : ಶಾಲೆಯಲ್ಲಿ ಪ್ರತಿನಿತ್ಯ ನಡೆಯುವ ಸಾಮೂಹಿಕ ಪ್ರಾರ್ಥನೆ ನನಗೆ ನನ್ನ ಓದಿನ ಮೇಲೆ ಏಕಾಗ್ರತೆ ಮೂಡಿಸಿತು. ಜೆಎಸ್ಎಸ್ ಶಾಲೆಯಿಂದಲೇ ನನ್ನ ಕನಸು ನನಸಾಯಿತು. ನಾನು ಇಲ್ಲಿ ಸ್ವ-ಶಿಸ್ತನ್ನು ಕಲಿತೆ. ಪರಮಪೂಜ್ಯ ಸ್ವಾಮೀಜಿಯವರಿಗೆ ನನ್ನ ಅನಂತ ಪ್ರಣಾಮಗಳು.
ಧರಣೇಶ್ ವಿ.,
ಕೆಪಿಟಿಸಿಎಲ್ ಅಭಿಯಂತರ
ಶಾಲೆಯ ಕುರಿತು ಅಭಿಪ್ರಾಯ : ಶಾಲೆಯ ಕ್ರೀಡಾ ಚಟುವಟಿಕೆಗಳು ನನಗೆ ಕ್ರಿಕೆಟ್ ಆಡಲು ಪ್ರೇರೇಪಿಸಿತು. ಪರಮಪೂಜ್ಯ ಸ್ವಾಮೀಜಿಯವರ ಆಶೀರ್ವಾದಗಳೊಂದಿಗೆ ಇಲ್ಲಿಗೆ ಸೇರುವ ಬಡ ಮಕ್ಕಳು ತಮ್ಮ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಬಹುದು.
ರಾಜೇಶ್ವರಿ ಗಾಯಕ್ವಾಡ್,
ಭಾರತೀಯ ಕ್ರಿಕೆಟರ್
ಶಾಲೆಯ ಕುರಿತು ಅಭಿಪ್ರಾಯ : ಜೆಎಸ್ಎಸ್ ಆಸ್ಪತ್ರೆಯ ವೈದ್ಯರು ನನಗೆ ವೈದ್ಯ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಸ್ಫೂರ್ತಿಯಾದರು. ನಾನು ಕರ್ನಾಟಕದ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಬಯಸುವೆ. ಶಾಲೆಯ ಸಮರ್ಪಿತ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ಎಲ್ಲ ಶಿಕ್ಷಕರು ಹಾಗೂ ಪರಮಪೂಜ್ಯ ಸ್ವಾಮೀಜಿಯವರಿಗೆ ನನ್ನ ಪ್ರಣಾಮಗಳನ್ನು ಸಲ್ಲಿಸುತ್ತೇನೆ.