ಕ್ರೀಡಾ ಚಟುವಟಿಕೆಗಳು ಮತ್ತು ಆಟಗಳು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆಯಲ್ಲಿ ಬಹಳ ಮುಖ್ಯವಾದ ಪಾತ್ರ ನಿರ್ವಹಿಸುತ್ತದೆ. ಶಾಲೆಯಲ್ಲಿ ಅನೇಕ ಕ್ರೀಡೆಗಳನ್ನು ಕಲಿಯುವ ಅವಕಾಶಗಳಿದ್ದು, ಆಸಕ್ತಿಗೆ ತಕ್ಕಂತೆ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಶಾಲೆಯಲ್ಲಿ ದೊಡ್ಡ ಆಟದ ಮೈದಾನವಿದೆ. ವಾಲಿಬಾಲ್, ಖೊ-ಖೊ, ಕಬ್ಬಡ್ಡಿ, ಬ್ಯಾಡ್ಮಿಂಟನ್, ಥ್ರೋಬಾಲ್, ಫುಟ್‌ಬಾಲ್, ಹಾಕಿ, ಹ್ಯಾಂಡ್‌ಬಾಲ್, ಕ್ರಿಕೆಟ್, ಚೆಸ್, ಕೇರಂ, ಷಟಲ್, ಟೇಬಲ್ ಟೆನ್ನಿಸ್, ಅಥ್ಲೆಟಿಕ್ಸ್ ಹಾಗೂ ಯೋಗ ಇವುಗಳ ಕಲಿಕೆಗೆ ಬೇಕಾದಂತಹ ಎಲ್ಲಾ ಉಪಕರಣಗಳಿವೆ. ಈ ಚಟುವಟಿಕೆಗಳಲ್ಲಿ ತರಬೇತಿ ಪಡೆದು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿರುವ ಹಲವು ವಿದ್ಯಾರ್ಥಿಗಳು ಅನೇಕ ಬಹುಮಾನಗಳನ್ನು ಗೆದ್ದು ಶಾಲೆಗೆ ಕೀರ್ತಿ ತಂದಿದ್ದಾರೆ. ಶಾಲೆಯ ವಿದ್ಯಾರ್ಥಿನಿ ಕು. ರಾಜೇಶ್ವರಿ ಗಾಯಕ್‌ವಾಡ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಸದಸ್ಯೆಯಾಗಿರುವುದು ನಮಗೆ ಹೆಮ್ಮೆಯ ಸಂಗತಿ
ಇವುಗಳ ಜೊತೆಗೆ ನಮ್ಮ ಶಾಲೆಯಲ್ಲಿ ಆಸಕ್ತ ಮಕ್ಕಳಿಗೆ ‘ಮಲ್ಲಕಂಬ’ದಲ್ಲೂ ಸಹ ತರಬೇತಿ ನೀಡಲಾಗುತ್ತದೆ.