ಜೆಎಸ್‍ಎಸ್ ಪ್ರೌಢಶಾಲೆಯು, ಕನ್ನಡ ಮತ್ತು ಇಂಗ್ಲೀಷ್ ಎರಡೂ ಬೋಧನಾ ಮಾಧ್ಯಮಗಳಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿಯು ನಿಗದಿಪಡಿಸುವ ಪಠ್ಯಕ್ರಮವನ್ನು ಅನುಸರಿಸುತ್ತದೆ. ಇದು ಸಹಶಿಕ್ಷಣ ಸಂಸ್ಥೆಯಾಗಿದ್ದು 1ರಿಂದ 10ನೇ ತರಗತಿಯವರೆಗೆ ಶಿಕ್ಷಣವನ್ನು ಒದಗಿಸಲಾಗುತ್ತದೆ. ನಮ್ಮ ಶಾಲೆಯು ಸಮಗ್ರ ದೃಷ್ಟಿಕೋನದ ಮೂಲಕ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಗುರಿಯನ್ನು ಹೊಂದಿದೆ.
ಪ್ರಾಥಮಿಕ ಶಾಲಾ ಹಂತ ಮಗುವಿಗೆ ಸುಭದ್ರವಾದ ಶೈಕ್ಷಣಿಕ ಅಡಿಪಾಯವನ್ನು ಒದಗಿಸುವ ಹಂತವಾಗಿರುತ್ತದೆ. ಇಲ್ಲಿ ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಕ್ರಿಯಾಶೀಲವಾಗಿ ಆಲೋಚಿಸಲು ಪ್ರೋತ್ಸಾಹಿಸಲಾಗುತ್ತದೆ. ಪರಿಣಾಮಕಾರಿ ಕಲಿಕೆಯನ್ನು ಖಾತ್ರಿಪಡಿಸಲು ಸುರಕ್ಷಿತ ಹಾಗೂ ಸಕಾರಾತ್ಮಕ ವಾತಾವರಣವನ್ನು ಒದಗಿಸುವುದರ ಜೊತೆಗೆ, ಮಕ್ಕಳ ಶಾರೀರಿಕ, ಭಾವನಾತ್ಮಕ ಮತ್ತು ಅರಿವಿನ ಕೌಶಲ್ಯಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗುತ್ತದೆ.
ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಸಮಾಜದ ವಾಸ್ತವ ಸವಾಲುಗಳನ್ನು ಎದುರಿಸಲು ಸಜ್ಜಾಗುತ್ತಿರುತ್ತಾರೆ. ಆಗ ಕೇವಲ ಶೈಕ್ಷಣಿಕ ಕಲಿಕೆಗಷ್ಟೇ ಅಲ್ಲದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಕಡೆ ಹೆಚ್ಚು ಗಮನ ಕೇಂದ್ರೀಕರಿಸಲು ಪ್ರಯತ್ನಿಸಲಾಗುತ್ತದೆ. ವಿದ್ಯಾರ್ಥಿಗಳಲ್ಲಿ ಆಧ್ಯಾತ್ಮಿಕ, ಸಾಮಾಜಿಕ, ಹಾಗೂ ಸೈದ್ಧಾಂತಿಕ ಮೌಲ್ಯಗಳನ್ನು ಅಭಿವೃದ್ಧಿಪಡಿಸಿ, ಸ್ವತಃ ಅನ್ವೇಷಿಸಲು ದಾರಿ ಮಾಡಿಕೊಡುವುದು ಈ ಶಾಲೆಯ ವೈಶಿಷ್ಟವಾಗಿದೆ. ಶಾಲೆಯ ಪಠ್ಯಕ್ರಮದಲ್ಲಿ ವಿವಿಧ ಸಾಂಸ್ಕøತಿಕ ಹಾಗೂ ಕ್ರೀಡಾ ಚಟುವಟಿಕೆಗಳಿಗೂ ಅವಕಾಶವಿದ್ದು, ಇದರಿಂದ ವಿದ್ಯಾರ್ಥಿಗಳ ಸಹಜ ಕೌಶಲ್ಯಗಳು ಜಾಗೃತವಾಗುವಲ್ಲಿ ನೆರವಾಗುತ್ತದೆ.